ವಿಕ್ಷಿಪ್ತ
ಚಿಕ್ಕದ್ದೊಂದು ಆಟಿಕೆಯನ್ನಿಟ್ಟುಕೊಂಡು ಫೇಸ್ ಬುಕ್ಕಿನಲ್ಲಿ ಬರೆಯಲಾರಂಭಿಸಿದ್ದ ಕತೆಯೊಂದು ನಿಧಾನಕ್ಕೆ ತುಂಬ ಜನಪ್ರಿಯವಾಗಲಾರಂಭಿಸಿದ್ದು ನಿಜಕ್ಕೂ ಆಶ್ಚರ್ಯವೇ. ಮೊದಮೊದಲು ಹತ್ತು ಭಾಗಗಳಲ್ಲಿ ಮುಗಿಸಿಬಿಡೋಣವೆಂದುಕೊಂಡಿದ್ದ ಕತೆ ನನ್ನ ಕೈ ಮೀರಿ ಬೆಳೆದರೂ ಓದುಗರಲ್ಲಿ ಕೊಂಚವೂ ಬೇಸರ ಮೂಡಿಸದೇ ಓದಿಸಿಕೊಂಡಿದ್ದು ಹೋಗಿದ್ದು ಸೋಜಿಗ. ಒಂದು ಹಂತಕ್ಕೆ ಓದುಗರು ಇದನ್ನೋದುತ್ತ, ಇದರ ಭಾಗವೇ ಆಗಿ ಹೋಗಿ ಕತೆಯ ಕೆಲವು ಸಾವುನೋವುಗಳು ತಮ್ಮ ವೈಯಕ್ತಿಕವೇ ಏನೋ ಎನ್ನುವಂತೆ ಭಾವಿಸಿ ಹೊತ್ತಿಲ್ಲದ್ದ ಹೊತ್ತಿನಲ್ಲಿ ನನಗೆ ಸಂದೇಶ ಕಳುಹಿಸಿ, 'ನಿಮಗೆ ಕರುಣೆ ಇಲ್ಲವಾ, ಅವರನ್ನೇಕೆ ಕೊಂದಿರಿ.' ಎಂದು ಬಯ್ದು ನನ್ನನ್ನು ಅಪರಾಧಿ ಸ್ಥಾನಕ್ಕೆ ನಿಲ್ಲಿಸಿದ್ದೂ ಇದೆ. ಹಾಗೆ ಓದುಗರು ಅಪರಾಧಿ ಸ್ಥಾನಕ್ಕೆ ನಿಲ್ಲಿಸಿದ್ದರೂ ಓದುಗರಿಗೆ ನನ್ನ ಕತೆಯೊಂದು ತಮ್ಮದೇ ಕತೆಯೆನ್ನುವ ಭಾವ ಕೊಟ್ಟಿದೆ ಎನ್ನುವ ಸಂತೃಪ್ತಿಯೇ ನನಗೆ ಹೆಚ್ಚು ಖುಷಿ ಕೊಟ್ಟಿತ್ತು ಎನ್ನುವುದನ್ನು ವಿವರಿಸಬೇಕಿಲ್ಲ. ಪೂರ್ತಿ ಐವತ್ತು ಕಂತುಗಳಲ್ಲಿ ಈ ಕತೆಯನ್ನು ಮುಗಿಸಿದಾಗ ಅನೇಕ ಓದುಗರು ಕತೆಯನ್ನು ಕಾದಂಬರಿಯಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸುವಂತೆ ಕೇಳಿದ್ದರು. ಅಂಥಹ ಹತ್ತಾರು ಓದುಗರ ಕೋರಿಕೆಯ ಫಲವೇ, 'ವಿಕ್ಷಿಪ್ತ' ಎನ್ನುವ ಈ ಕಾದಂಬರಿಯ ಮುದ್ರಣ ರೂಪ.
Original: $1.95
-70%$1.95
$0.58Product Information
Product Information
Shipping & Returns
Shipping & Returns
Description