Product image 1
Product image 2
HomeStore

ಉಸುರಿನ ಪರಿಮಳವಿರಲು

ಉಸುರಿನ ಪರಿಮಳವಿರಲು

ವಚನಗಳು ಮನಸ್ಸಿನ ಸಂವೇದನೆಗಳು. ಇವುಗಳು ಅರ್ಥವಾಗದಿರುವ ತತ್ವಗಳಲ್ಲ, ಸಿದ್ಧಾಂತಗಳಲ್ಲ; ಸರಳವಾದ ನುಡಿ ಚಿಂತನೆಗಳು. ಪ್ರತಿಯೊಬ್ಬರೂ ತನ್ನೊಳಗೆ ರೂಪಿಸಿಕೊಳ್ಳಬಹುದಾದ ಜ್ಞಾನಕ್ರಿಯೆಯನ್ನು ಹಲವು ಅಧ್ಯಯನದ ಮೂಲಕ ಸೂತ್ರೀಕರಿಸಿರುವ ಜನನುಡಿಗಳು. ವೇದಗಳು, ಪುರಾಣಗಳು ಹಾಗೂ ಸಂಸ್ಕೃತ ಕಾವ್ಯಗಳ ಅಪಾರ ಅಧ್ಯಯನವು ನಮ್ಮ ವಚನಕಾರರಲ್ಲಿ ಲಭ್ಯವಿದೆ. ಅವುಗಳ ವಿಶಾಲ ಓದು ನಮಗೆ ದೊರಕದ ಕಾರಣ ಕೆಲವು ವಚನಗಳು ಕ್ಲಿಷ್ಟ ಎನಿಸಬಹುದು. ಆದರೆ, ಅವುಗಳ ಭಾವಲೋಕವು ಮಂದಿರದಷ್ಟೇ ಭಕ್ತಿಯಿಂದ ಸ್ವರೂಪಗೊಂಡಿದೆ. ಜಂಗಮತತ್ವದಲ್ಲಿ ಲೋಕ ಪ್ರಕಾಶಗೊಂಡಿದೆ. ಧ್ಯಾನಿಸಿದವರ ಮನೋಕ್ತಿಯಲ್ಲಿ ವಚನಗಳು ಒಡಮೂಡುತ್ತವೆ.
ಮಾತನ್ನು ನುಡಿಯಾಗಿಸಿ, ಕೆಲಸವನ್ನು ಕಾಯಕವನ್ನಾಗಿಸಿ ಆತ್ಮಾಭಿಮಾನ ಮೂಡಿಸಿದ ಶ್ರೇಷ್ಠ ಚಿಂತನೆಗಳಿವು. ಇಂತಹ ವಚನಗಳು ನಮ್ಮ ಮನೋಲೋಕಗಳಿಗೆ ಮುಖಾಮುಖಿಯಾದ ಕ್ರಮವನ್ನು ಇಲ್ಲಿ ಅಧ್ಯಯನ ಮಾಡಬಹುದು. ಪ್ರತಿ ವಚನವೂ ಕೂಡ ಅಂತರ್ಮುಖಿ ಧ್ಯಾನಕ್ಕೆ ಒತ್ತು ಕೊಡುತ್ತದೆ. 'ನಿನ್ನನ್ನು ನೀ ಮೊದಲು ಅರಿ' ಎಂಬ ಸಿದ್ಧಾಂತವನ್ನು ಜಗತ್ತಿಗೆ ಸಾರಿದ ಕನ್ನಡದ ಮೊದಲ ಸಾಹಿತ್ಯವಿದು. ಆಳ್ವಿಕೆಯನ್ನು ಓಲೈಸುವ ಕಾಲಧರ್ಮಗಳೊಳಗೆ, ಶ್ರೀಸಾಮಾನ್ಯನು ತನ್ನನ್ನು ಕುರಿತು ತಾನು ಆಲೋಚಿಸುವಂತೆ ಮಾಡಿದ ನುಡಿಯ ಸ್ವರೂಪಗಳವು. ಈ ದೃಷ್ಟಿಯಲ್ಲಿ ಮನಸ್ಸನ್ನೇ ಕೇಂದ್ರೀಕರಿಸಿ, ಆತ್ಮದ ಬಯಲನ್ನು ಕಾಣುವ, ತನ್ನ ಉಸಿರಿನ ಪರಿಮಳವನರಿತು ತನ್ನನ್ನು ತಾನು ಅರಿಯುವ, ಆತ್ಮಸಂಗಾತದ ಧೈರ್ಯವನ್ನು ಕುರಿತು ಇಲ್ಲಿ ಅಧ್ಯಯನ ಮಾಡಲಾಗಿದೆ.

$0.97

Original: $3.24

-70%
ಉಸುರಿನ ಪರಿಮಳವಿರಲು

$3.24

$0.97

Product Information

Shipping & Returns

Description

ಉಸುರಿನ ಪರಿಮಳವಿರಲು | Harivu Books