Product image 1
HomeStore

ಉರಿಯ ಸಿರಿ

ಉರಿಯ ಸಿರಿ

ಪೆಟ್ರೋಲು, ಡೀಸೆಲ್, ಕಲ್ಲಿದ್ದಲು ಇಲ್ಲದಿದ್ದರೆ ಒಂದು ದಿನವೂ ನಾವು ಬದುಕಲಾರವು ಎಂಬ ಹಂತಕ್ಕೆ ಬಂದು ಮುಟ್ಟಿದ್ದೇವೆ. ನಾವು ಓಡಾಡುವ ವಾಹನಗಳಷ್ಟೇ ಅಲ್ಲ, ಬೆಳೆಯುವ ಆಹಾರ, ಕುಡಿಯುವ ನೀರು, ಬಳಸುವ ಉಪಕರಣಗಳು, ತೊಡುವ ಬಟ್ಟೆಬರೆ, ವಾಸಿಸುವ ಕಟ್ಟಡಗಳು, ಕಾಲಿನ ಚಪ್ಲಿ, ತಲೆಯಮೇಲಿನ ಛತ್ರಿ ಎಲ್ಲವೂ ಹೂತಿಟ್ಟ ಇಂಧನಗಳನ್ನೇ ಅವಲಂಬಿಸಿವೆ. ಅವು ಅಪಾಯಕಾರಿ ಶಕ್ತಿಗಳೆಂದು ಪ್ರಕೃತಿಯೇ ಎಂದೋ ಹೂತಿಟ್ಟಿದ್ದರೂ ನಾವು ಅವನ್ನು ಎಗ್ಗಿಲ್ಲದೆ ಎತ್ತುತ್ತ, ಬಳಸುತ್ತ ಆಕಾಶವನ್ನೆಲ್ಲ ಮಲಿನ ಮಾಡಿ, ಭೂಮಿಯನ್ನು ಬಿಸಿಮಾಡಿ ಇಡೀ ಜೀವಲೋಕವನ್ನೇ ಅಪಾಯದ ಅಂಚಿಗೆ ತಂದು ನಿಲ್ಲಿಸಿದ್ದೇವೆ.

ಈ ಪೆಟ್ರೊದಾಸ್ಯತ್ವದಿಂದ ಬಚಾವಾಗುವ ಉಪಾಯಗಳನ್ನು ಇಂದಿನ ಸೂರ್ಯ ನಮಗೆ ತೋರಿಸುತ್ತಿದ್ದಾನೆ. ಅಪಾರ ಶಕ್ತಿದ್ರವ್ಯಗಳನ್ನು ಅವನೇ ನಮ್ಮ ಗಿಡಮರಗಳಲ್ಲಿ, ಕಾಡಿನ ಬೀಜಗಳಲ್ಲಿ ಬಚ್ಚಿಟ್ಟಿದ್ದಾನೆ. ಅದರಲ್ಲಿರುವ 'ಸಿರಿ'ಯನ್ನು ಮನಗಂಡು ಎಂಜಿನ್‌ಗಳಿಗೆ ಅಂಥ ಜೈವಿಕ ಇಂಧನವನ್ನು ತುಂಬಿ ಮೊದಲಿಗೆ ಪ್ರಯೋಗಿಸಿ ಕರ್ನಾಟಕ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ಕನ್ನಡಿಗರ ಈ ಹೆಮ್ಮೆಯ ಸಾಧನೆಯ ಕಥಾನಕ ಇಲ್ಲಿದೆ. ಇದು ಸೂರ್ಯ ತೋರಿದ ಹಾದಿ.

-ನಾಗೇಶ ಹೆಗಡೆ
$0.26

Original: $0.86

-70%
ಉರಿಯ ಸಿರಿ

$0.86

$0.26

Product Information

Shipping & Returns

Description

ಪೆಟ್ರೋಲು, ಡೀಸೆಲ್, ಕಲ್ಲಿದ್ದಲು ಇಲ್ಲದಿದ್ದರೆ ಒಂದು ದಿನವೂ ನಾವು ಬದುಕಲಾರವು ಎಂಬ ಹಂತಕ್ಕೆ ಬಂದು ಮುಟ್ಟಿದ್ದೇವೆ. ನಾವು ಓಡಾಡುವ ವಾಹನಗಳಷ್ಟೇ ಅಲ್ಲ, ಬೆಳೆಯುವ ಆಹಾರ, ಕುಡಿಯುವ ನೀರು, ಬಳಸುವ ಉಪಕರಣಗಳು, ತೊಡುವ ಬಟ್ಟೆಬರೆ, ವಾಸಿಸುವ ಕಟ್ಟಡಗಳು, ಕಾಲಿನ ಚಪ್ಲಿ, ತಲೆಯಮೇಲಿನ ಛತ್ರಿ ಎಲ್ಲವೂ ಹೂತಿಟ್ಟ ಇಂಧನಗಳನ್ನೇ ಅವಲಂಬಿಸಿವೆ. ಅವು ಅಪಾಯಕಾರಿ ಶಕ್ತಿಗಳೆಂದು ಪ್ರಕೃತಿಯೇ ಎಂದೋ ಹೂತಿಟ್ಟಿದ್ದರೂ ನಾವು ಅವನ್ನು ಎಗ್ಗಿಲ್ಲದೆ ಎತ್ತುತ್ತ, ಬಳಸುತ್ತ ಆಕಾಶವನ್ನೆಲ್ಲ ಮಲಿನ ಮಾಡಿ, ಭೂಮಿಯನ್ನು ಬಿಸಿಮಾಡಿ ಇಡೀ ಜೀವಲೋಕವನ್ನೇ ಅಪಾಯದ ಅಂಚಿಗೆ ತಂದು ನಿಲ್ಲಿಸಿದ್ದೇವೆ.

ಈ ಪೆಟ್ರೊದಾಸ್ಯತ್ವದಿಂದ ಬಚಾವಾಗುವ ಉಪಾಯಗಳನ್ನು ಇಂದಿನ ಸೂರ್ಯ ನಮಗೆ ತೋರಿಸುತ್ತಿದ್ದಾನೆ. ಅಪಾರ ಶಕ್ತಿದ್ರವ್ಯಗಳನ್ನು ಅವನೇ ನಮ್ಮ ಗಿಡಮರಗಳಲ್ಲಿ, ಕಾಡಿನ ಬೀಜಗಳಲ್ಲಿ ಬಚ್ಚಿಟ್ಟಿದ್ದಾನೆ. ಅದರಲ್ಲಿರುವ 'ಸಿರಿ'ಯನ್ನು ಮನಗಂಡು ಎಂಜಿನ್‌ಗಳಿಗೆ ಅಂಥ ಜೈವಿಕ ಇಂಧನವನ್ನು ತುಂಬಿ ಮೊದಲಿಗೆ ಪ್ರಯೋಗಿಸಿ ಕರ್ನಾಟಕ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ಕನ್ನಡಿಗರ ಈ ಹೆಮ್ಮೆಯ ಸಾಧನೆಯ ಕಥಾನಕ ಇಲ್ಲಿದೆ. ಇದು ಸೂರ್ಯ ತೋರಿದ ಹಾದಿ.

-ನಾಗೇಶ ಹೆಗಡೆ
ಉರಿಯ ಸಿರಿ | Harivu Books