Product image 1
Product image 2
HomeStore

ಸಿಗದವರು

ಸಿಗದವರು

"ಅನುಬೆಳ್ಳೆ (ರಾಘವೇಂದ್ರ ಬಿ. ರಾವ್) ಅವರ ಹೊಸ ಕಥಾ ಸಂಕಲನ 'ಸಿಗದವರು' ಪುಸ್ತಕದಲ್ಲಿ ಒಟ್ಟು ಒಂಬತ್ತು ಕತೆಗಳಿದ್ದು, ಪ್ರತಿಯೊಂದು ಕತೆಯೂ ಸಂಕೀರ್ಣವಾದ ಮನುಷ್ಯ ಸಂಬಂಧಗಳ, ಭಾವನಾತ್ಮಕ ತಲ್ಲಣಗಳ, ಬದುಕಿನ ಹೋರಾಟದ ನಡುವೆ ಅದು ಒಡ್ಡುವ ಸಂಘರ್ಷಗಳ ಮುಖಾಮುಖಿಯಾಗಿದೆ.

ಹಾಗೆಯೇ ಈ ಎಲ್ಲ ಕತೆಗಳೂ ಕಾದಂಬರಿಯೊಂದರ ಯಾವುದೋ ಒಂದು ಅಧ್ಯಾಯವೋ ಎಂಬಂತೆ ಭಾಸವಾಗುವ ಪರಿಯಲ್ಲಿವೆ. ಅಂದರೆ, ಇಲ್ಲಿ ನಮಗೆ ಓದಲು ಸಿಕ್ಕಿರುವ ಭಾಗಕ್ಕೆ ಹಿಂದೆಯೂ ಬಹುದೊಡ್ಡ ಕತೆಯಿದೆ, ಮುಂದೆಯೂ ಇದಕ್ಕೆ ಸೇರಿಕೊಂಡು ಮುಂದುವರಿಯತಕ್ಕ ಕತೆಯಿದೆ ಎನ್ನುವ ಭಾವದಿಂದ ಓದುಗನಿಗೆ ಮುಕ್ತಿಯಿಲ್ಲ. ಹಾಗಾಗಿಯೇ ಈ ಕತೆಗಳು ಓದುಗನನ್ನೇ ಕತೆಗಾರನನ್ನಾಗಿಸುವ ತೀವ್ರತೆಯನ್ನು ಹೊಂದಿವೆ.

ಅರವತ್ತಕ್ಕೂ ಹೆಚ್ಚು ಕೃತಿಗಳ ಲೇಖಕ ಅನುಬೆಳ್ಳೆಯವರು ಇಲ್ಲಿ ಅನುಸರಿಸುವ ತಂತ್ರ ಉದ್ದೇಶಪೂರ್ವಕ ಹೆಣೆದಿರುವಂಥದ್ದು ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಈ ಕತೆಗಳು ಒಂದು ಬಗೆಯ ಸವಾಲನ್ನು ಒಡ್ಡುತ್ತವೆ, ಸೂಕ್ಷ್ಮವಾದ ಓದನ್ನು ಬಯಸುತ್ತವೆ."

- ನರೇಂದ್ರ ಪೈ

$0.49

Original: $1.62

-70%
ಸಿಗದವರು

$1.62

$0.49

Product Information

Shipping & Returns

Description

"ಅನುಬೆಳ್ಳೆ (ರಾಘವೇಂದ್ರ ಬಿ. ರಾವ್) ಅವರ ಹೊಸ ಕಥಾ ಸಂಕಲನ 'ಸಿಗದವರು' ಪುಸ್ತಕದಲ್ಲಿ ಒಟ್ಟು ಒಂಬತ್ತು ಕತೆಗಳಿದ್ದು, ಪ್ರತಿಯೊಂದು ಕತೆಯೂ ಸಂಕೀರ್ಣವಾದ ಮನುಷ್ಯ ಸಂಬಂಧಗಳ, ಭಾವನಾತ್ಮಕ ತಲ್ಲಣಗಳ, ಬದುಕಿನ ಹೋರಾಟದ ನಡುವೆ ಅದು ಒಡ್ಡುವ ಸಂಘರ್ಷಗಳ ಮುಖಾಮುಖಿಯಾಗಿದೆ.

ಹಾಗೆಯೇ ಈ ಎಲ್ಲ ಕತೆಗಳೂ ಕಾದಂಬರಿಯೊಂದರ ಯಾವುದೋ ಒಂದು ಅಧ್ಯಾಯವೋ ಎಂಬಂತೆ ಭಾಸವಾಗುವ ಪರಿಯಲ್ಲಿವೆ. ಅಂದರೆ, ಇಲ್ಲಿ ನಮಗೆ ಓದಲು ಸಿಕ್ಕಿರುವ ಭಾಗಕ್ಕೆ ಹಿಂದೆಯೂ ಬಹುದೊಡ್ಡ ಕತೆಯಿದೆ, ಮುಂದೆಯೂ ಇದಕ್ಕೆ ಸೇರಿಕೊಂಡು ಮುಂದುವರಿಯತಕ್ಕ ಕತೆಯಿದೆ ಎನ್ನುವ ಭಾವದಿಂದ ಓದುಗನಿಗೆ ಮುಕ್ತಿಯಿಲ್ಲ. ಹಾಗಾಗಿಯೇ ಈ ಕತೆಗಳು ಓದುಗನನ್ನೇ ಕತೆಗಾರನನ್ನಾಗಿಸುವ ತೀವ್ರತೆಯನ್ನು ಹೊಂದಿವೆ.

ಅರವತ್ತಕ್ಕೂ ಹೆಚ್ಚು ಕೃತಿಗಳ ಲೇಖಕ ಅನುಬೆಳ್ಳೆಯವರು ಇಲ್ಲಿ ಅನುಸರಿಸುವ ತಂತ್ರ ಉದ್ದೇಶಪೂರ್ವಕ ಹೆಣೆದಿರುವಂಥದ್ದು ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಈ ಕತೆಗಳು ಒಂದು ಬಗೆಯ ಸವಾಲನ್ನು ಒಡ್ಡುತ್ತವೆ, ಸೂಕ್ಷ್ಮವಾದ ಓದನ್ನು ಬಯಸುತ್ತವೆ."

- ನರೇಂದ್ರ ಪೈ

ಸಿಗದವರು | Harivu Books