ಓದುಗೊಳವೆ
ವಾರ ವಾರವೂ ಬರೆಯುವುದು ಲೇಖಕನಿಗೆ ಸಿಗಬಹುದಾದ ಬಹುದೊಡ್ಡ ಶಿಸ್ತುಬದ್ಧ ಸ್ವಾತಂತ್ರ್ಯ. ಅದಕ್ಕೆ ವಾರ ವಾರ ಮನಸ್ಸನ್ನು ಹದಗೊಳಿಸಿಕೊಳ್ಳುವುದು, ಪಕ್ಷವಾಗಿ ಸಿದ್ಧವಾಗುವುದು ಕೂಡ ಒಂದು ಹಿತಾನುಭವವೇ. ಅಕ್ಷರಪಾತ್ರೆ ಅಕ್ಷಯಪಾತ್ರೆಯಂತಲ್ಲ. ಬರೆದಂತೆಲ್ಲ ಬೇಗ ಖಾಲಿಯಾಗಿ ಬಿಡುತ್ತದೆ. ವಾರವಾರ ತುಂಬಿಕೊಳ್ಳಬೇಕೆಂದರೆ, ವಾರವಾರ ಓದಬೇಕು, ತಿರುಗಬೇಕು, ಹುಡುಕಬೇಕು, ಸಂದರ್ಶಿಸಬೇಕು, ಚರ್ಚಿಸಬೇಕು, ಸುಮ್ಮನೆ ಕುಳಿತು ಧೇನಿಸಬೇಕು. ನಂತರ ಎದೆಯನ್ನು ಟೇಬಲ್ಲಿಗೊರಗಿ ಬರೆಯಬೇಕು. ಅಲ್ಲಿಗೆ ಮುಗಿಯಲಿಲ್ಲ. ಓದುಗರಿಂದ ಮೆಚ್ಚಿಸಿಕೊಳ್ಳಬೇಕು. ಈ ವಾರ ಮುಗಿಯುತ್ತಿದ್ದಂತೆ ಪುನಃ ಮುಂದಿನ ವಾರಕ್ಕೆ ಅಣಿಯಾಗಬೇಕು. ಈ ತಿರುಗಣೆಯಲ್ಲೇ ಗಿರಕಿ ಹೊಡೆಯಬೇಕು. ಅಷ್ಟಾಗಿಯೂ ಸುಸ್ತಾಗಬಾರದು ಮತ್ತು ಓದುಗರನ್ನು ಸುಸ್ತು ಹೊಡೆಸಬಾರದು. ಇವೆಲ್ಲವೂ ನಿಖರವಾಗಿ, ನಿರಾಯಾಸವಾಗಿ, ನಿರುದ್ವಿಗ್ನವಾಗಿ, ನೀಟಾಗಿ ನಡೆಯುತ್ತಿರಬೇಕು. ಆಗ ಓದುವ ಮನಸ್ಸೂ ನಿರುಮ್ಮಳ. ಇಲ್ಲಿನ ಬರಹಗಳೂ ಈ ಮನಸ್ಥಿತಿಯವು. ಪುಸ್ತಕವೂ ನಮ್ಮ ಮನಸ್ಸಿನೊಳಗೆ ಅಕ್ಷರ, ವಿಚಾರಗಳನ್ನು 'ಉಫ್' ಎಂದು ಊದುವ, ಓದುಗೊಳವೆಯಲ್ಲವೇ?
-ವಿಶ್ವೇಶ್ವರ ಭಟ್
-ವಿಶ್ವೇಶ್ವರ ಭಟ್
$2.70
ಓದುಗೊಳವೆ—
$2.70
Product Information
Product Information
Shipping & Returns
Shipping & Returns
Description