ಕಾವ್ಯ ಸಂಭವ
"ಸತ್ಯಕ್ಕೆ ತೊಡಿಸುವ ಭಾಷೆಯ ಬಟ್ಟೆಯ ಬಗ್ಗೆ ಎಚ್ಚರ ಅತ್ಯಂತ ಅಗತ್ಯ. ಮನಸ್ಸಿಗೆ ಬಂದಿದ್ದು ಅಕ್ಷರದಲ್ಲಿ ಬರುವ ಹೊತ್ತಿಗೆ ವೇಷ ತೊಟ್ಟುಬಿಡುವ ಸೋಜಿಗವೊಂದು ಭಾಷೆಯ ರೋಚಕತೆಯೋ, ಮನಸ್ಸಿನ ರೋಚಕತೆಯೋ ತಿಳಿಯದ ರಹಸ್ಯ. ಮನಸ್ಸಿನ ಭಿತ್ತಿಯಲ್ಲಿ ಮೂಡಿದ ಯಾರದೋ ಮುಖ, ಮನಸ್ಸಿನಲ್ಲಿ ನೆಲೆಯಾದ ಯಾವುದೋ ಮನೆಯ ಯಾವುದೋ ನಿರ್ದಿಷ್ಟ ಸ್ಥಳದಲ್ಲಿ, ವಿಶಿಷ್ಟ ನೆರಳು-ಬೆಳಕಿನ ನಿರ್ದಿಷ್ಟ ಹೊತ್ತಲ್ಲಿ ಕ್ಲಿಕ್ಕಿಸಿದ ಒಂದು ಚಿತ್ರ ಕೊಡುವ ತತ್ಕ್ಷಣದ ಅನುಭೂತಿಯನ್ನು ಬರೆಯಲು ಪುಟಗಟ್ಟಲೆ ಹೇಳಬೇಕಾದೀತು.
ಆದರೆ ಮನಸ್ಸಿಗೆ ಅದು ಒಂದು ಕ್ಷಣದ ವಿದ್ಯಮಾನ. ಎಲ್ಲ ಹೇಳಿಯೂ ಅದು ಮನಸ್ಸಿನಲ್ಲಿ ಆ ಕ್ಷಣದಲ್ಲಿ ಮೂಡಿಸಿದ ಭಾವ ಬರಹದಲ್ಲಿ ಬರದೆಯೇ ಹೋಗಬಹುದು. ನಮಗೇ ಗೊತ್ತಿಲ್ಲದ ಇನ್ನೇನೋ ಅಲ್ಲಿ ಬಂದು ಹಾಜರಿ ಹಾಕಬಹುದು. ಯಾವುದು ನಿಜ ಮತ್ತು ಯಾವುದು ಸುಳ್ಳು ಎನ್ನುವುದಕ್ಕಿಂತ ಯಾವುದು ಚೆನ್ನಾಗಿದೆ ಎನ್ನುವುದು ಕೊನೆಗೂ ಒಬ್ಬ ಸಾಹಿತಿಗೆ ಮುಖ್ಯ. ಒಂದು ಬರಹದ ಜೀವ ಇರುವುದು ಸತ್ಯಕ್ಕೆ ನಿಷ್ಠನಾಗಿರುವುದರಲ್ಲಿ ಅಲ್ಲ, ಅನುಭವವನ್ನು ಮರುರೂಪಿಸುವ ಶಕ್ತಿಯಲ್ಲಿ. ಅನುವಾದ ಸೋಲುವುದು, ಕವಿತೆಯೊಂದು ಸೋಲುವುದು, ಕತೆಯೊಂದು ಮುಕ್ಕಾಗುವುದು ಇಲ್ಲಿಯೇ."
Original: $2.16
-70%$2.16
$0.65Product Information
Product Information
Shipping & Returns
Shipping & Returns
Description