Product image 1
HomeStore

ಹಾಣಾದಿ

ಹಾಣಾದಿ

'ಹಾಣಾದಿ' ಕಾದಂಬರಿ ತನ್ನ ಕಥಾವಸ್ತು ನಿರೂಪಣಾ ವಿಧಾನ ಮತ್ತು ಲೇಖಕ ಹೀಗೆ ಹಲವು ಕಾರಣಗಳಿಂದ ಗಮನ ಸೆಳೆಯುವ ಕೃತಿ.

ವರ್ತಮಾನ ಮತ್ತು ಭೂತಕಾಲ ಜತೆಜತೆಗೆ ಸಾಗುವ, ನೆನಪುಗಳ ಸಿಕ್ಕುಗಳಲ್ಲಿ ಓದುಗನನ್ನು ಸಿಲುಕಿಸುವ ಕಾದಂಬರಿ 'ಗಾರುಡಿ ವಾಸ್ತವತೆ' ಯ ತಂತ್ರವನ್ನು ಬಳಸುತ್ತದೆ. ಕಥೆಯೊಳಗೆ ಕಥೆ, ಅದರೊಳಿನ್ನೊಂದು ಕಥೆ ಎಂಬಂತೆ ಇದರ ನಿರೂಪಣೆ. ಕಾದಂಬರಿಯಲ್ಲಿ ಜನಪದ ರಮ್ಯಾದ್ಭುತ ಕಥೆಗಳಲ್ಲಿನಂತೆ ಗುಬ್ಬಿ ಆಯಿ ಎಂಬ ಅಡಗೂಳಜ್ಜಿ ಇದ್ದಾಳೆ. ಬೇತಾಳವನ್ನು ಬೆನ್ನಿಗೆ ಹಾಕಿಕೊಂಡಿರುವ ರಾಜಾ ತ್ರಿವಿಕ್ರಮನಂತೆ ನೆನಪುಗಳ ಪಾಥೇಯವನ್ನು ಹೊತ್ತ ಕಥಾನಿರೂಪಕನಿದ್ದಾನೆ. ಅವರ ಮಾತುಕತೆ, ನೆನಪು, ಉಪಕಥೆಗಳು ಭ್ರಮ-ವಿಭ್ರಮ ಲೋಕವನ್ನು ಸೃಷ್ಟಿಸುತ್ತವೆ. ಒಂದು ಗ್ರಾಮದ ಅವನತಿ, ಸಾವು-ನೋವು, ವಿಷಮ ಸಂಸಾರ, ಸಂಬಂಧಗಳು, ಮಾನವ ಸಹಜ ದ್ವೇಷಾಸೂಯೆ, ಬದುಕು ಬಲಿ ಕೊಡುವ ನಂಬಿಕೆ ಇತ್ಯಾದಿಗಳು ಈ ಗಾರುಡಿ ಲೋಕದಲ್ಲಿ ಬಿಚ್ಚಿಕೊಳ್ಳುತ್ತವೆ.

ಕಥಾನಾಯಕ ಭೂತಕಾಲದ ನೆನಪುಗಳ ಆಶ್ರಿತ. ಈ ನೆನಪುಗಳು ಮತ್ತೆ ಮತ್ತೆ ಬಾಲ್ಯಕ್ಕೆಳೆದು ಸಿಹಿಕಹಿಯನ್ನು ಉಣಬಡಿಸುತ್ತದೆ. ಗುಬ್ಬಿ ಆಯಿ, ಒಮ್ಮೆ ಸಾಕ್ಷಿಯಾದರೆ, ಮಗದೊಮ್ಮೆ ದುರಂತಗಳಲ್ಲಿ ಭಾಗಿ. ಕಾದಂಬರಿಯಲ್ಲಿ, ಅಪ್ಪ, ಪುಟ್ಟ ಬಾಲಕಿ, ಅಡವಿ, ಗುಡ್ಡ, ಹೊಲ, ಹಳ್ಳಿಯ ಉಳಿದ ಪಾತ್ರಗಳಂತೆಯೇ ಬಾದಾಮಿ ಮರ ಕೂಡ ಪ್ರಮುಖ ಪಾತ್ರ. ಮಾತ್ರವಲ್ಲ, ಆ ಹಳ್ಳಿಯಲ್ಲಿ ನಡೆಯುವ ಎಲ್ಲ ದುರಂತಗಳಿಗೆ ಸಾಕ್ಷಿಯಾಗಿ ಕೊನೆಗೆ ಗುರುತು ಕೂಡ ಉಳಿಸದೆ ಮರೆಯಾಗುವ ಪ್ರತಿಮೆ.

ಲೇಖಕನ ಕಾರಣದಿಂದ ಗಮನ ಸೆಳೆವ ಕೃತಿಯೆಂದು ಹೇಳಿದೆ. ಇನ್ನೂ ವಿದ್ಯಾರ್ಥಿಯಾಗಿರುವ ಇಪ್ಪತ್ತರ ಆಸುಪಾಸಿನ ಕಪಿಲ ಹುಮನಾಬಾದ ಕಾದಂಬರಿ ರಚನೆಯಲ್ಲಿ ತೋರಿರುವ ಶ್ರದ್ಧೆ, ತಂತ್ರ, ಆಯ್ದುಕೊಂಡ ಕಥಾವಸ್ತು ಮತ್ತು ಅದನ್ನು ನಿಭಾಯಿಸಿರುವ ದೃಷ್ಟಿಯಿಂದ ಅಭಿನಂದನೆಗೆ ಅರ್ಹರು. ಸಾಗಬೇಕಾದ ದಾರಿ ದೂರವಿರಬಹುದು. ಆದರೆ, ಅವರ ಮೊದಲ ಹೆಜ್ಜೆ ಅಳೆದು-ತೂಗಿ, ವಿಚಾರಿಸಿ ಇಟ್ಟಿರುವಂಥದ್ದು. ಹಾಗೆಂದೇ, ತನ್ನ ಸೀಮಿತಾರ್ಥದಲ್ಲಿ ಹಾಣಾದಿ ಒಂದು ಯಶಸ್ವಿ ಕಾದಂಬರಿ.

ವಿಕ್ರಮ-ಬೇತಾಳ ಕಥೆಯ ಅಂತ್ಯವನ್ನು ನಾವೆಲ್ಲ ಬಲ್ಲೆವು. ಹಾಣಾದಿ ಕೃತಿಯ ಅಂತ್ಯವನ್ನು ಓದಿಯೇ ಅರಿತುಕೊಳ್ಳಬೇಕು.

-ಕೇಶವ ಮಳಗಿ
$1.41
ಹಾಣಾದಿ
$1.41

Product Information

Shipping & Returns

Description

You may also like

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೩

$1.62

$0.49

-70%NEW
Thumbnail 1

ವಿದ್ವಾನ್ ಪಾನ್ಯಂ ಸುಂದರ ಶಾಸ್ತ್ರಿ ಹಿತೋಪದೇಶ

$1.41

$0.42

-70%NEW
Thumbnail 1

ವಿಶ್ವದಲ್ಲಿ ಜೀವಾಂಕುರ ಎಂದು? ಎಂತು?

$1.08

$0.32

-69%NEW
Thumbnail 1

ಪಕ್ಷಿಗಳ ಹಾರಾಟ

$0.65

$0.20

-68%NEW
Thumbnail 1

ಹಾಸ್ಯ ಪಟಾಕಿ

$0.22

$0.07

NEW
Thumbnail 1

ಯೋಗ ದಿನಚರಿ

$1.35

NEW
Thumbnail 1

ಆಕಾಶ ಮತ್ತು ಬೆಕ್ಕು

$1.08

-70%NEW
Thumbnail 1

ಮಾಯಾಲೋಕ :೧

$4.12

$1.24

-70%NEW
Thumbnail 1

ರನ್ನನ ಗದಾಯುದ್ಧ ಪ್ರವೇಶ

$0.81

$0.24

-70%NEW
Thumbnail 1

ವೈದೇಹಿ ಅವರ ಆಯ್ದ ಕವಿತೆಗಳು

$0.81

$0.24

-70%NEW
Thumbnail 1

ಪು.ತಿ.ನ. ಅವರ ಆಯ್ದ ಬರಹಗಳು

$0.81

$0.24

-70%NEW
Thumbnail 1

ನಿಗೂಢನಾಣ್ಯ

$2.16

$0.65

ಹಾಣಾದಿ | Harivu Books