Product image 1
Product image 2
HomeStore

ಏಕಾಂಬರ

ಏಕಾಂಬರ

ಕರ್ನಾಟಕ ನೈರುತ್ಯ ಮೂಲೆಯಲ್ಲಿರುವ ಗುಣಸಾಗರ ದೊಡ್ಡದೂ ಅಲ್ಲದ, ಚಿಕ್ಕದೂ ಅಲ್ಲದ ಪುಟ್ಟ ಪಟ್ಟಣ. ಅಲ್ಲಿ ಚಿಕ್ಕಪುಟ್ಟ ಘಟನೆಗಳಿಗೆ ತಲೆ ಕೆಡಿಸಿಕೊಳ್ಳುವವರೇ ಹೆಚ್ಚು. ಕಳೆದೊಂದು ವರ್ಷದಿಂದ ಒಂದೇ ಒಂದು ಅಹಿತಕರ ಸಂಗತಿಯು ಸುದ್ದಿವಾಹಿನಿಗಳಲ್ಲಿ ಕಾಣಿಸಿಕೊಂಡಿರದಿದ್ದರೂ ಜನ ಹಳೆ ಸುದ್ದಿಗಳನ್ನು ಮೆಲುಕು ಹಾಕುತ್ತ ಕಾಲಕ್ಷೇಪ ಮಾಡಿ ಬಸವಳಿದಿದ್ದರು. ಅವರ ಅದೃಷ್ಟವೋ ಎಂಬಂತೆ ಸುದ್ದಿಯೊಂದು ಅಲ್ಲಿನ ರೇಣುಕಾ ಬಡಾವಣೆಯಲ್ಲಿ ಕಾಣಿಸಿಕೊಂಡು ನಿಧನಿಧಾನವಾಗಿ ಪಟ್ಟಣದ ತುಂಬೆಲ್ಲಾ ವ್ಯಾಪಿಸಿತು. ಅದು ಗಂಡಾಂತರವಲ್ಲದಿದ್ದರೂ ವಿಚಿತ್ರ ಮತ್ತು ನಗೆಪಾಟಲಿಗೆ ಸಂಬಂಧಿಸಿದ್ದಾಗಿತ್ತು.

ಅದೆಂದರೆ ಅದೇ ಪಟ್ಟಣದ ಬ್ಯಾಂಕೊಂದರಲ್ಲಿ ಮ್ಯಾನೇಜರಾಗಿರುವ ಏಕಾಂಬರ ಹೊಸ ಅಂಗಿಯನ್ನು ಹೊಲಿಸಿಕೊಳ್ಳಲು ನಿರ್ಧರಿಸಿರುವನೆಂಬುದು ಕಾರಣ- ಕಳೆದ ಇಪ್ಪತ್ತು, ಮುವ್ವತ್ತು ವರ್ಷಗಳಿಂದ ಆತನು ಒಂದೇ ಒಂದು ಹೊಸ ಅಂಗಿಯನ್ನು ಹೊಲಿಸಿಕೊಳ್ಳದೆ ತನ್ನ ಹಳೆಯ ಅಂಗಿಗಳ ಮೇಲೆಯೇ ದಿನಗಳನ್ನು ತಳ್ಳುತ್ತ ಪಟ್ಟಣದಾದ್ಯಂತ ಹೆಸರಾಗಿದ್ದನು. ನಿವೃತ್ತಿಯ ಬಳಿಕ ಅವಧೂತ ಪದವಿಯನ್ನು ಅಲಂಕರಿಸಲು, ಎಲ್ಲಾ ಸಿದ್ಧತೆಗಳನ್ನು ಮಾಡಿ ಕೊಂಡಿದ್ದ, ಅದೂ ಗುಟ್ಟಾಗಿ, ಅಂಥವನು ಹೊಸ ಅಂಗಿ ಹೊಲಿಸಿಕೊಳ್ಳುವುದೆಂದರೇನು?!
$0.53

Original: $1.78

-70%
ಏಕಾಂಬರ

$1.78

$0.53

Product Information

Shipping & Returns

Description

ಕರ್ನಾಟಕ ನೈರುತ್ಯ ಮೂಲೆಯಲ್ಲಿರುವ ಗುಣಸಾಗರ ದೊಡ್ಡದೂ ಅಲ್ಲದ, ಚಿಕ್ಕದೂ ಅಲ್ಲದ ಪುಟ್ಟ ಪಟ್ಟಣ. ಅಲ್ಲಿ ಚಿಕ್ಕಪುಟ್ಟ ಘಟನೆಗಳಿಗೆ ತಲೆ ಕೆಡಿಸಿಕೊಳ್ಳುವವರೇ ಹೆಚ್ಚು. ಕಳೆದೊಂದು ವರ್ಷದಿಂದ ಒಂದೇ ಒಂದು ಅಹಿತಕರ ಸಂಗತಿಯು ಸುದ್ದಿವಾಹಿನಿಗಳಲ್ಲಿ ಕಾಣಿಸಿಕೊಂಡಿರದಿದ್ದರೂ ಜನ ಹಳೆ ಸುದ್ದಿಗಳನ್ನು ಮೆಲುಕು ಹಾಕುತ್ತ ಕಾಲಕ್ಷೇಪ ಮಾಡಿ ಬಸವಳಿದಿದ್ದರು. ಅವರ ಅದೃಷ್ಟವೋ ಎಂಬಂತೆ ಸುದ್ದಿಯೊಂದು ಅಲ್ಲಿನ ರೇಣುಕಾ ಬಡಾವಣೆಯಲ್ಲಿ ಕಾಣಿಸಿಕೊಂಡು ನಿಧನಿಧಾನವಾಗಿ ಪಟ್ಟಣದ ತುಂಬೆಲ್ಲಾ ವ್ಯಾಪಿಸಿತು. ಅದು ಗಂಡಾಂತರವಲ್ಲದಿದ್ದರೂ ವಿಚಿತ್ರ ಮತ್ತು ನಗೆಪಾಟಲಿಗೆ ಸಂಬಂಧಿಸಿದ್ದಾಗಿತ್ತು.

ಅದೆಂದರೆ ಅದೇ ಪಟ್ಟಣದ ಬ್ಯಾಂಕೊಂದರಲ್ಲಿ ಮ್ಯಾನೇಜರಾಗಿರುವ ಏಕಾಂಬರ ಹೊಸ ಅಂಗಿಯನ್ನು ಹೊಲಿಸಿಕೊಳ್ಳಲು ನಿರ್ಧರಿಸಿರುವನೆಂಬುದು ಕಾರಣ- ಕಳೆದ ಇಪ್ಪತ್ತು, ಮುವ್ವತ್ತು ವರ್ಷಗಳಿಂದ ಆತನು ಒಂದೇ ಒಂದು ಹೊಸ ಅಂಗಿಯನ್ನು ಹೊಲಿಸಿಕೊಳ್ಳದೆ ತನ್ನ ಹಳೆಯ ಅಂಗಿಗಳ ಮೇಲೆಯೇ ದಿನಗಳನ್ನು ತಳ್ಳುತ್ತ ಪಟ್ಟಣದಾದ್ಯಂತ ಹೆಸರಾಗಿದ್ದನು. ನಿವೃತ್ತಿಯ ಬಳಿಕ ಅವಧೂತ ಪದವಿಯನ್ನು ಅಲಂಕರಿಸಲು, ಎಲ್ಲಾ ಸಿದ್ಧತೆಗಳನ್ನು ಮಾಡಿ ಕೊಂಡಿದ್ದ, ಅದೂ ಗುಟ್ಟಾಗಿ, ಅಂಥವನು ಹೊಸ ಅಂಗಿ ಹೊಲಿಸಿಕೊಳ್ಳುವುದೆಂದರೇನು?!
ಏಕಾಂಬರ | Harivu Books